ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.
- ಶ್ರೀ ವಿ. ಸೋಮಣ್ಣ
ನಮ್ಮ ಸೋಮಣ್ಣ
ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳು
22 ಹೊಸ ರೈಲು ಸೇವೆಗಳ ಆರಂಭ.
73 ರೈಲುಗಳಿಗೆ ಹೆಚ್ಚುವರಿ ನಿಲುಗಡೆ ಕಲ್ಪಿಸಲಾಗಿದೆ.
32 ರೈಲುಗಳ ಮಾರ್ಗವನ್ನು ವಿಸ್ತರಿಸಲಾಗಿದೆ.
ನೂತನ ರೈಲ್ವೆ ಲೈನ್ ಕಾಮಗಾರಿ
ಬಾಗಲಕೋಟೆ-ಕುಡಚಿ - 142 ಕಿ.ಮೀ
ಗದಗ - ವಾಡಿ - 257 ಕಿ.ಮೀ
ಚಿಕ್ಕಮಗಳೂರು-ಬೇಲೂರು - 23 ಕಿ.ಮೀ
ತುಮಕೂರು ರಾಯದುರ್ಗ - 206 ಕಿ.ಮೀ
ತುಮಕೂರು - ದಾವಣಗೆರೆ - 191 ಕಿ.ಮೀ
ಗಿಣಿಗೇರಾ - ರಾಯಚೂರು - 165 ಕಿ.ಮೀ
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು - 96 ಕಿ.ಮೀ
ಮಾರಿಕುಪ್ಪಂ-ಕುಪ್ಪಂ - 24 ಕಿ.ಮೀ
ಬೆಳಗಾವಿ-ಧಾರವಾಡ - 73 ಕಿ.ಮೀ
ಹಾಸನ-ಬೇಲೂರು - 27 ಕಿ.ಮೀ
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 14 ರೈಲ್ವೆ ಮೇಲ್ಸೇತುವೆಗಳು (ROB), 9 ರೈಲ್ವೆ ಕೆಳಸೇತುವೆಗಳು (RUB), 1 ಕಾಲುಸೇತುವೆ (FOB), 2 ಅಂಡರ್‌ಪಾಸ್‌ಗಳು ಹಾಗೂ 2 ಪಾದಚಾರಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರು ನಗರದ ರೈಲು ನಿಲ್ದಾಣಗಳ ಅಭಿವೃದ್ಧಿ
ಬೆಂಗಳೂರು ನಗರದ ಪ್ರಮುಖ ರೈಲು ನಿಲ್ದಾಣಗಳನ್ನು ಆಧುನೀಕರಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ – ₹485 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಕ್ಟೋಬರ್ 2026ರೊಳಗೆ ಪೂರ್ಣಗೊಳಿಸುವ ಗುರಿಯಿದೆ.
ಯಶವಂತಪುರ ರೈಲು ನಿಲ್ದಾಣ – ₹370 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 2026ರೊಳಗೆ ಪೂರ್ಣಗೊಳಿಸುವ ಗುರಿಯಿದೆ.
ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣ – ಅಂದಾಜು ₹1,370 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ.
ಯಲಹಂಕ ರೈಲ್ ವೀಲ್ ಫ್ಯಾಕ್ಟರಿ- ಐತಿಹಾಸಿಕ ಸಾಧನೆ!
ಭಾರತೀಯ ರೈಲ್ವೆಯ ಸ್ವಾವಲಂಬನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಯಲಹಂಕದ ರೈಲ್ ವೀಲ್ ಫ್ಯಾಕ್ಟರಿಯಲ್ಲಿ ಮೂರನೇ ಆಕ್ಸಲ್( ಅಚ್ಚು) ಮಷಿನಿಂಗ್ ಲೈನ್‌ಗೆ ಚಾಲನೆ ನೀಡಲಾಗಿದೆ.
ಈ ಯೋಜನೆಯಿಂದ ವಾರ್ಷಿಕ ಅಚ್ಚು ಉತ್ಪಾದನಾ ಸಾಮರ್ಥ್ಯ 90,000ರಿಂದ ಸುಮಾರು 1,12,000ಕ್ಕೆ ಏರಿಕೆಯಾಗಿದೆ. ಭಾರತೀಯ ರೈಲ್ವೆಯ ಹೆಚ್ಚುತ್ತಿರುವ ಬೇಡಿಕೆಯನ್ನು ದೇಶೀಯ ಉತ್ಪಾದನೆಯ ಮೂಲಕ ಪೂರೈಸಲು ಇದು ನೆರವಾಗುತ್ತದೆ.
ಈ ಮೂಲಕ ಪ್ರಧಾನಿ ಮೋದಿ ಅವರ "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ" ಕನಸಿಗೆ ಮತ್ತಷ್ಟು ಬಲ ಸಿಗಲಿದೆ.
ಈ ಮಹತ್ವದ ಸಾಧನೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು. ಅವರ ನಾಯಕತ್ವದಲ್ಲಿ ಭಾರತೀಯ ರೈಲ್ವೆ ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದೆ.
ದ್ವಿಪಥ ಕಾಮಗಾರಿ
ಬಳ್ಳಾರಿ-ಚಿಕ್ಕಜಾಜೂರು - 185 ಕಿ.ಮೀ
ಹೊಟಗಿ-ಕುಡಗಿ-ಗದಗ - 284 ಕಿ.ಮೀ
ಯಶವಂತಪುರ-ಚನ್ನಸಂದ್ರ - 21.70 ಕಿ.ಮೀ
ಬೈಯಪ್ಪನಹಳ್ಳಿ-ಹೊಸೂರು - 48 ಕಿ.ಮೀ
ಕ್ವಾಡ್ರಪ್ಪಿಂಗ್ (ಡಿಪಿಆರ್ ಅನುಮೋದನೆ ಹಂತದಲ್ಲಿದೆ)
ಹೊಸಪೇಟೆ-ಬಳ್ಳಾರಿ - 65 ಕಿ.ಮೀ
ಬೆಂಗಳೂರು-ತುಮಕೂರು - 70 ಕಿ.ಮೀ
ಹುಬ್ಬಳ್ಳಿ-ಹೊಸಪೇಟೆ - 143 ಕಿ.ಮೀ
ಪ್ರಗತಿಯಲ್ಲಿರುವ ಡಿಪಿಆರ್
ಹುಬ್ಬಳ್ಳಿ-ಅಂಕೋಲಾ - 167 ಕಿ.ಮೀ
ಗದಗ–ವಾಡಿ ಹೊಸ ರೈಲು ಮಾರ್ಗದ ತಾಳಕಲ್–ಕುಷ್ಟಗಿ ವಿಭಾಗವನ್ನು ಉದ್ಘಾಟಿಸಲಾಗಿದೆ. ಹಾಗೂ ಗಿಣಿಗೇರ–ರಾಯಚೂರು ಹೊಸ ರೈಲು ಮಾರ್ಗದ ಸಿಂಧನೂರು–ರಾಯಚೂರು ವಿಭಾಗಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ.
ಅಲಮಟ್ಟಿ–ಯಾದಗಿರಿ (162 ಕಿ.ಮೀ.) ಹೊಸ ರೈಲು ಮಾರ್ಗಕ್ಕೆ ₹4.05 ಕೋಟಿ ವೆಚ್ಚದಲ್ಲಿ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ನೀಡಲಾಗಿದೆ.
ಹೊಸ ನಿಲುಗಡೆಗಳು
ಕೆಎಸ್‌ಆರ್ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ತುಮಕೂರು ನಿಲ್ದಾಣದಲ್ಲಿ ನಿಲುಗಡೆ
ಯಶವಂತಪುರ - ಪಾಂಢರ್ಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)ಗೆ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ
ಯಶವಂತಪುರ - ಪಾಂಢರ್ಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)ಗೆ ರಾಯಬಾಗ ನಿಲ್ದಾಣದಲ್ಲಿ ನಿಲುಗಡೆ
ಕೆಎಸ್‌ಆರ್ ಬೆಂಗಳೂರು - ಹಜ್ರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆ
ತಿರುಪತಿ - ಹಜ್ರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ರಾಜಂಪೇಟೆ ನಿಲ್ದಾಣದಲ್ಲಿ ನಿಲುಗಡೆ
ಕೆಎಸ್‌ಆರ್ ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್‌ಗೆ ತಿಪಟೂರು ನಿಲ್ದಾಣದಲ್ಲಿ ನಿಲುಗಡೆ
ಕೆಎಸ್‌ಆರ್ ಬೆಂಗಳೂರು - ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್‌ಗೆ ತಿಪಟೂರು ನಿಲ್ದಾಣದಲ್ಲಿ ನಿಲುಗಡೆ
ಹುಬ್ಬಳ್ಳಿ - ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ (ವಾರಕ್ಕೆ ಮೂರು ದಿನ)ಗೆ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ
ಹಿಸಾರ್ - ಕೊಯಮತ್ತೂರು ಎಕ್ಸ್‌ಪ್ರೆಸ್‌ಗೆ ಕುಮಟಾ ನಿಲ್ದಾಣದಲ್ಲಿ ನಿಲುಗಡೆ
ತಿರುವನಂತಪುರಂ ಸೆಂಟ್ರಲ್ - ಹಜ್ರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ಗೆ ಕುಂದಾಪುರ ನಿಲ್ದಾಣದಲ್ಲಿ ನಿಲುಗಡೆ
ವಿವಿಧ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು 25 ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದು, ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕಾಗಿ ಸುಮಾರು 1,500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ 5 ಅಮೃತ್ ಭಾರತ್ ರೈಲು ನಿಲ್ದಾಣಗಳನ್ನು — ಮುನಿರಾಬಾದ್, ಬಾಗಲಕೋಟೆ, ಗದಗ, ಗೋಕಾಕ್ ರಸ್ತೆ ಹಾಗೂ ಧಾರವಾಡ — ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಎರ್ನಾಕುಲಂ - ಹಜ್ರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ಗೆ ಕುಂದಾಪುರ ನಿಲ್ದಾಣದಲ್ಲಿ ನಿಲುಗಡೆ
ಚಿಕ್ಕಮಗಳೂರು - ಯಶವಂತಪುರ ಎಕ್ಸ್‌ಪ್ರೆಸ್‌ಗೆ ನಿಟ್ಟೂರು ನಿಲ್ದಾಣದಲ್ಲಿ ನಿಲುಗಡೆ
ಕೆಎಸ್‌ಆರ್ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಾವೇರಿ ನಿಲ್ದಾಣದಲ್ಲಿ ನಿಲುಗಡೆ
ಔರಂಗಾಬಾದ್ - ತಿರುಪತಿ ಎಕ್ಸ್‌ಪ್ರೆಸ್‌ಗೆ ಭಾಲ್ಕಿ ನಿಲ್ದಾಣದಲ್ಲಿ ನಿಲುಗಡೆ
ಅಗರ್ತಲಾ - ಸಿಲ್ಚರ್ ಎಕ್ಸ್‌ಪ್ರೆಸ್‌ಗೆ ಪೆಂಚರ್ಥಲ್ ನಿಲ್ದಾಣದಲ್ಲಿ ನಿಲುಗಡೆ
ಹುಬ್ಬಳ್ಳಿ - ಸಿಂಧನೂರು ಪ್ಯಾಸೆಂಜರ್, ಯಶವಂತಪುರ - ಸಿಂಧನೂರು ಎಕ್ಸ್‌ಪ್ರೆಸ್ ಹಾಗೂ ಹುಬ್ಬಳ್ಳಿ - ಸಿಂಧನೂರು ಎಕ್ಸ್‌ಪ್ರೆಸ್‌ಗೆ ಗೋರೆಬಾಳ ನಿಲ್ದಾಣದಲ್ಲಿ ನಿಲುಗಡೆ
ಅಮೃತ್ ಭಾರತ್ ಸ್ಟೇಷನ್ ಯೋಜನೆ (ABSS) ಅಡಿಯಲ್ಲಿ ಕಲಬುರಗಿ, ತುಮಕೂರು, ಸೊಲ್ಲಾಪುರ, ಅರಸೀಕೆರೆ, ಬೀರೂರು, ಭುವನೇಶ್ವರ, ಪುರಿ, ಅಳ್ನಾವರ, ಬೆಳಗಾವಿ, ಖಾನಾಪುರ, ಅಮೃತಸರ, ಏಕತಾ ನಗರ, ಕೋಜಿಕೋಡ್, ಮಡಗಾಂವ್, ಬಂಗಾರಪೇಟೆ, ಬಿಡದಿ, ರಾಮನಗರ ಹಾಗೂ ತಿರುಚಿರಾಪಳ್ಳಿ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲಿನೆಯನ್ನು ಮಾಡಲಾಗಿದ್ದು, ನವೀಕರಿಸಲಾದ ಚಕ್ರಪಳ್ಳಿ, ಊರ್ಗಾಂ ಮತ್ತು ಕೋರಮಂಡಲ್ ರೈಲು ನಿಲ್ದಾಣಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ.
ಬೆಂಗಳೂರಿನ ರಸ್ತೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ₹81,000 ಕೋಟಿ ಅಂದಾಜು ವೆಚ್ಚದ 287 ಕಿ.ಮೀ. ಉದ್ದದ ವರ್ತುಲ ರೈಲ್ವೇ ಯೋಜನೆಯನ್ನು ಜಾರಿಗೆ ತರಲು ಬದ್ಧರಾಗಿದ್ದಾರೆ.
ವಿಸ್ತರಣೆ
ಕಾಚಿಗುಡಾ - ಮಂಗಳೂರು ಎಕ್ಸ್‌ಪ್ರೆಸ್‌ನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದೆ.
ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಕಾವೇರಿ ಎಕ್ಸ್‌ಪ್ರೆಸ್, ಮೈಸೂರು - ಕೆಎಸ್‌ಆರ್ ಬೆಂಗಳೂರು ಸಿಟಿ ಮಾಲ್ಗುಡಿ ಎಕ್ಸ್‌ಪ್ರೆಸ್, ಕಾಚಿಗುಡಾ - ಮೈಸೂರು ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು - ಮೈಸೂರು ಮೆಮು ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು - ಮೈಸೂರು ಮೆಮು, ಕೆಎಸ್‌ಆರ್ ಬೆಂಗಳೂರು - ಮೈಸೂರು ಮೆಮು ಹಾಗೂ ಕೆಎಸ್‌ಆರ್ ಬೆಂಗಳೂರು - ಮೈಸೂರು ಮೆಮು ರೈಲುಗಳನ್ನು ಅಶೋಕಪುರಂವರೆಗೆ ವಿಸ್ತರಿಸಲಾಗಿದೆ.
ಕಬಕ ಪುತ್ತೂರು - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆವರೆಗೆ ವಿಸ್ತರಿಸಲಾಗಿದ್ದು, ನರಿಮೊಗರು, ಕಣಿಯೂರು ಹಾಲ್ಟ್, ಯಡಮಂಗಲ, ಕೊಡಿಂಬಾಳ ಹಾಗೂ ಬಾಜೆಕೆರೆ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗಿದೆ.
ಕೆಎಸ್‌ಆರ್ ಬೆಂಗಳೂರು - ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮೆಮು (ದೈನಂದಿನ) ರೈಲನ್ನು ಅನಂತಪುರದವರೆಗೆ ವಿಸ್ತರಿಸಲಾಗಿದೆ.
ಕೆಎಸ್‌ಆರ್ ಬೆಂಗಳೂರು - ಹುಬ್ಬಳ್ಳಿ ಎಕ್ಸ್‌ಪ್ರೆಸ್‌ನ್ನು ಸಿಂಧನೂರಿನವರೆಗೆ ವಿಸ್ತರಿಸಲಾಗಿದೆ.
ಕರ್ನಾಟಕವನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡಿನೊಂದಿಗೆ ಸಂಪರ್ಕಿಸುವ ಹೊಸ ರೈಲು ಮಾರ್ಗಗಳಿಗೆ ಆದ್ಯತೆ ನೀಡಲಾಗಿದೆ.